ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿಹಲವು ಸಭೆಗಳಿದ್ದು ತುರ್ತು ಅವರು ದೆಹಲಿಗೆ ತೆರಳುವ ಮುನ್ನ CWC ಸಭೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ, CWC ಸಭೆ ಬಗ್ಗೆ ದೆಹಲಿಯಲ್ಲಿ ಮಾತನಾಡುತ್ತೇನೆ ಎಂದರು. ಇನ್ನು ಅಧಿಕಾರ ಹಂಚಿಕೆ ಗೊಂದಲ ಯಾವಾಗ ಬಗೆ ಹರಿಯುತ್ತೆ ಎಂಬ ಪ್ರಶ್ನೆಗೆ ಸಂಬಂಧಿಸಿ ಮಾತನಾಡಿ, ಆದಷ್ಟು ಬೇಗ ಬಗೆ ಹರಿಯುತ್ತೆ ಅದರ ಬಗ್ಗೆ ನೀವು ಚಿಂತೆ ಮಾಡಬೇಡಿ ಎಂದರು.