ಮದ್ದೂರು: ಭಾರತೀನಗರದದಲ್ಲಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
Maddur, Mandya | Nov 13, 2025 ಮದ್ದೂರು ತಾಲ್ಲೂಕು ಭಾರತೀನಗರದ ಇನ್ನರ್ವಿಲ್ ಸಂಸ್ಥೆಯ ವತಿಯಿಂದ ಲಕ್ಷ್ಮಿಮಂಜುಳಾಬೋರೇಗೌಡ ಅವರ ನಿವಾಸದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು. ಇನ್ನರ್ ವಿಲ್ ಸಂಸ್ಥೆಯ ಅಧ್ಯಕ್ಷೆ ಧರಣಿಪುಟ್ಟೇಗೌಡ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದ್ದು, ಪ್ರೀತಿಸಿ ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಭಾಷೆಯ ಬಗ್ಗೆ ಅಭಿಮಾನ ಕೇವಲ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದು ಪ್ರತಿನಿತ್ಯ ನಿತ್ಯೋತ್ಸವವಾಗಬೇಕು. ಕನ್ನಡ ನಾಡಿನಲ್ಲಿ ಹೊರರಾಜ್ಯದಿಂದ ಬಂದಂತವರಿಗೆ ಹೆಚ್ಚು ಉದ್ಯೋಗಳು ಸಿಗುವುದರ ಜೊತೆಗೆ ಸೌಲಭ್ಯಗಳನ್ನು ಕೂಡ ಅನುಭವಿಸುತ್ತಿದ್ದಾರೆಂದು ವಿಷಾಧಿಸಿದರು. ಇದೇ ವೇಳೆ ವೈಜ್ಞಾನಿ ಸಂಶೋಧನಾ ವಿಭಾಗದಲ್ಲಿ ಸಂಶೋಧನೆ