ಬೆಂಗಳೂರು ಉತ್ತರ: ಚನ್ನಪಟ್ಟದಲ್ಲಿ ಪೊಲೀಸರ ಮೇಲೆ ಹಣ ಎರಚಿದವರ ಮೇಲೆ ಯಾಕೆ ಕ್ರಮ ಆಗಿಲ್ಲ: ನಗರದಲ್ಲಿ ಹೆಚ್ಡಿಕೆ ಕಿಡಿ
ಚನ್ನಪಟ್ಟಣದಲ್ಲಿ ಪೊಲೀಸರ ಮೇಲೆ ಹಣ ಎರಚಿದ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಯಲಹಂಕ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿಕೆ ಅವರು, ಚನ್ನಪಟ್ಟಣದಲ್ಲಿ ಖವ್ವಾಲಿ ಕಾರ್ಯಕ್ರನದಲ್ಲಿ ಪೊಲೀಸರ ಮೇಲೆ ಹಣ ಎರಚಿದ ಘಟನೆ ನಡೆದಿದೆ. ಚನ್ನಪಟ್ಟಣದಲ್ಲಿ ಪೊಲೀಸರ ಮುಂದೆ ಡಾನ್ಸ್ ಮಾಡ್ತಾರೆ, ಪೊಲೀಸರ ಮೇಲೆ ಹಣ ಎರಚ್ತಾರೆ. ಹಣ ಎರಚಿಸಿಕೊಂಡವರ, ಎರಚಿದವರ ಮೇಲೆ ಕ್ರಮ ಇಲ್ಲ. ಆದರೆ ಆರ್ಎಸ್ಎಸ್ ಪಥ ಸಂಚಲನದಲ್ಲಿ ಗಣವೇಷಧಾರಿ ಆಗಿದ್ದ ಪಿಡಿಓ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಕಲಬುರಗಿಯಲ್ಲಿ ಕ್ರಮ ವಹಿಸಿದ ಮೇಲೆ ಚನ್ನಪಟ್ಟಣದಲ್ಲಿ ಕ್ರಮ ಯಾಕಿಲ್ಲ? ಎಂದು ಸರ್ಕಾರದ ಮೇಲೆ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.