ಕಾಣೆಯಾದ ನಾರಾಯಣಪ್ಪ ಪತ್ತೆಗಾಗಿ ಕೋಲಾರ ಗ್ರಾಮಾಂತರ ಪೊಲೀಸರ ಮನವಿ ಕಾಣೆಯಾದ ವ್ಯಕ್ತಿಯ ಚಹರೆ: ಹೆಸರು: ನಾರಾಯಣಪ್ಪ, 60 ವರ್ಷ, ತಂದೆಯ ಹೆಸರು: ಗಂಗಪ್ಪ ವಕ್ಕಲೇರಿ ಗ್ರಾಮ, ಕೋಲಾರ ತಾಲ್ಲೂಕು. ಕೋಲು ಮುಖ, ಸಾಧಾರಣ ಮೈಕಟ್ಟು, 5.9 ಅಡಿ ಎತ್ತರ, ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಷರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಮೊ.ಸಂ: 9480802631ಯನ್ನು ಸಂಪರ್ಕಿಸಬಹುದು ಎಂದು ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.