ನವೆಂಬರ್ ಕ್ರಾಂತಿ ಬಗ್ಗೆ ಕಾಂಗ್ರೆಸ್ ನಾಯಕರ ಬೇರೆ ಬೇರೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಯಾರು ಮಾತನಾಡಿ ದಣಿವು ತೆಗೆದುಕೊಳ್ಳುವುದು ಬೇಡ ಎಂದರು. ಇನ್ನು ಪರಿಷತ್ ಆಕಾಂಕ್ಷೆಗಳ ಜೊತೆ ಡಿ ಕೆ ಶಿವಕುಮಾರ್ ಸಭೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನಾಲ್ಕೈದು ಜನರು ಅರ್ಜಿ ಹಾಕಿದ್ದಾರೆ. ಸ್ವಲ್ಪ ದಿನದಲ್ಲಿ ಟಿಕೆಟ್ ಪೈನಲ್ ಮಾಡುತ್ತೇನೆ. ಜಿಲ್ಲಾ ಮಂತ್ರಿಗಳ ಜೊತೆ ಸಭೆ ಮಾಡುತ್ತೇನೆ. ಆದಷ್ಟು ಶೀಘ್ರವಾಗಿ ಟಿಕೆಟ್ ಪೈನಲ್ ಮಾಡುತ್ತೇನೆ ಎಂದರು.