ರಾಜೀವ್ ಗೌಡ ಎಸ್ಕೇಪ್ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಸಿ ಸುಧಾಕರ್ ಅವರು, ಸರ್ಕಾರಿ ಅಧಿಕಾರಿ ವಿರುದ್ದದ ನಡೆ ಒಪ್ಪುವಂಥದಲ್ಲ, ಖಂಡಿಸ್ತೀವಿ ಅಂತಾ ಮೊದಲ ದಿನದಿಂದಲೂ ಹೇಳಿದ್ದೇವೆ. ಕ್ರಮ ಜರುಗಿಸ್ತೀವಿ ಅಂತಾನೂ ಹೇಳಿದ್ದೇವೆ. ಅಮೃತಗೌಡ ಅವ್ರು ದೂರು ಕೊಡೋದು ವಿಳಂಬ ಮಾಡಿದ್ರು. ಪೊಲೀಸರು ಅವ್ರು ಎಲ್ಲಿದ್ದಾರೆ ಅಂತಾ ಮಾಹಿತಿ ಕಲೆ ಹಾಕ್ತಿದ್ದಾರೆ. ಸಿಎಂ, ಗೃಹ ಸಚಿವರು, ಡಿಸಿಎಂ ಎಲ್ಲರೂ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ರಾಜಿ ಇಲ್ಲ, ಕ್ರಮ ಜರುಗಿಸ್ತೀವಿ. ಕೋರ್ಟ್ ಚೀಮಾರಿ ಹಾಕಿರೋದನ್ನ ಸ್ವಾಗತಿಸ್ತೇವೆ. ಅಧಿಕಾರಿ ವರ್ಗದ ನೈತಿಕ ಸ್ಥೈರ್ಯ ಕಾಪಾಡೋದು ನಮ್ಮ ಕರ್ತವ್ಯ ಎಂದರು.