ಕೋಲಾರ: ನ್ಯಾಯಾಂಗದಲ್ಲೂ ಕಪ್ಪು ಕುರಿಗಳಿವೆ : ನಗರದಲ್ಲಿ ನಿವೃತ್ತ ನ್ಯಾಯಮೂರ್ತಿ ಮುರಾರಿ ಮೌನಿ.
Kolar, Kolar | Oct 29, 2025 ನ್ಯಾಯಾಂಗದಲ್ಲೂ ಕಪ್ಪು ಕುರಿಗಳಿವೆ. ನಿವೃತ್ತ ನ್ಯಾಯಮೂರ್ತಿ ಮುರಾರಿ ಮೌನಿ.                                                                                                              ಕೆಲವೇ ಮಂದಿಯಿಂದ  ನ್ಯಾಯಾಂಗ ವ್ಯವಸ್ಥೆ ಕಲುಷಿತಗೊಂಡಿದೆ. ಅಂತಹ ವ್ಯಕ್ತಿಗಳಿಂದ ನ್ಯಾಯಾಂಗ ವ್ಯವಸ್ಥೆಯನ್ನು ಅನುಮಾನದಿಂದ ನೋಡಬೇಕಾಗಿದೆ. ವಕೀಲರೇ ನ್ಯಾಧೀಶರಾಗುವುದು. ಆದರೆ ಪ್ರಾಮಾಣಿಕರು ನ್ಯಾಯಾಧೀಶರಾದರೆ ನ್ಯಾಯಾಂಗ ವ್ಯವಸ್ಥೆ ಸಹ ಪ್ರಾಮಾಣಿಕವಾಗಿರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಕಪ್ಪು ಕುರಿಗಳಿವೆ. ಕಳ್ಳರು ಸುಳ್ಳರು ಆದ ವಕೀಲರು ನ್ಯಾಧೀಶರಾದರೆ ಇಡೀ ವ್ಯವಸ್ಥೆ ಹದಗೆಡುತ್ತದೆ ಎಂದು ನಿವೃತ್ತ ನ್ಯಾಯಧೀಶರಾದ  ಮುರಾರಿ ಮೌನಿಯವರು ತಿಳಿಸಿದ್ದಾರೆ.