ಶಿರಸಿ: ತೋಟದಳ್ಳಿಯ ಪತ್ರಕರ್ತ ಗುರುಪ್ರಸಾದ ಹೆಗಡೆ ಅಕಾಲಿಕ ನಿಧನ : ಗಣ್ಯರ ಸಂತಾಪ
ಶಿರಸಿ : ಶಿರಸಿಯಲ್ಲಿಯೂ ಕರ್ತವ್ಯ ನಿರ್ವಹಿಸಿ, ಕಾರವಾರದಲ್ಲಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಲವಾರು ವರ್ಷಗಳಿಂದ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಗುರುಪ್ರಸಾದ ಹೆಗಡೆ (34) ಶುಕ್ರವಾರ ಅಕಾಲಿಕವಾಗಿ ನಿಧನರಾದರು. ಶಿರಸಿ ತಾಲೂಕಿನ ತೋಟದಳ್ಳಿ ಗ್ರಾಮದ ನಿವಾಸಿಯಾಗಿದ್ದ ಗುರುಪ್ರಸಾದ ಹೆಗಡೆ ನಗು ಮೊಗದ ಸ್ನೇಹಿತನಾಗಿ ಎಲ್ಲಾ ಪತ್ರಕರ್ತರ ಪ್ರೀತಿಗೆ ಪಾತ್ರನಾಗಿದ್ದನು.ಉತ್ತಮ ಸುದ್ದಿಗಾರನಾಗಿದ್ದ ಗುರುಪ್ರಸಾದ ಅನಾರೋಗ್ಯದಿಂದಾಗಿ ಬನವಾಸಿಯಲ್ಲಿ ಸಂಬಂಧಿಗಳ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ನಿಧನ ಹೊಂದಿದರು. ಗುರುಪ್ರಸಾದ ನಿಧನಕ್ಕೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ ಸಂತಾಪ ಸೂಚಿಸಿದ್ದಾರೆ.