ಶಿರಸಿ: 'ರೂಮ್ ಮಾಡ್ತೀನಿ ಬಾ' ಎಂದ ವ್ಯಕ್ತಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ ನಗರ ಬಸ್ ನಿಲ್ದಾಣದಲ್ಲಿ ಘಟನೆ ವಿಡಿಯೋ ವೈರಲ್
ಜಿಲ್ಲೆಯ ಶಿರಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಬುಧವಾರ ರಾತ್ರಿ 10.30ರ ವೇಳೆ ಕಾದು ನಿಂತ ಮಹಿಳೆ ಬಳಿ ವ್ಯಕ್ತಿಯೊಬ್ಬ ಬಂದು ರೂಮ್ ಮಾಡ್ತೀನಿ ಬಾ ಎಂದು ಅಸಭ್ಯವಾಗಿ ನಡೆದುಕೊಂಡ ಪರಿಣಾಮ ಮಹಿಳೆ ಆಕ್ರೋಶಗೊಂಡು, ತನ್ನ ಚಪ್ಪಲಿಯಿಂದ ಸಾರ್ವಜನಿಕರ ಎದುರು ಥಳಿಸಿದ್ದಾರೆ. ಈ ಬಗ್ಗೆ ಗುರುವಾರ ಮಧ್ಯಾಹ್ನ 12ಕ್ಕೆ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ. ಕಾಯುವ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದು ಪಾಠ ಕಲಿಸಿದ್ದಾಳೆ.