ಶಿರಸಿ: 8ನೇ ವೇತನ ಆಯೋಗದಲ್ಲಿ ಪರಿಷ್ಕೃತ ಪಿಂಚಣಿ ನೀಡುವಂತೆ ಸಹಾಯಕ ಆಯುಕ್ತರಿಗೆ ಸರ್ಕಾರಿ ನಿವೃತ್ತ ನೌಕರರ ಮನವಿ
ಶಿರಸಿ: ಕೇಂದ್ರ ಸರ್ಕಾರದಲ್ಲಿ ೮ ನೇ ವೇತನ ಆಯೋಗದಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ಪಿಂಚಣಿ ಹಾಗೂ ಆರ್ಥಿಕ ಸೌಲಭ್ಯ ನೀಡಲು ಸಾಧ್ಯವಿಲ್ಲವೆಂದು ಲೋಕಸಭೆಯಲ್ಲಿ ಆರ್ಥಿಕ ಬಿಲ್ ಮಂಡಿಸಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಶಿರಸಿ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸರ್ಕಾರಿ ನೌಕರರಿಗೆ ಪಿಂಚಣಿ ಒಂದು ಆಸ್ತಿಯಾಗಿದ್ದು,44 ನೇ ಸಂವಿಧಾನಿಕ ತಿದ್ದುಪಡಿಯ ಪ್ರಕಾರ ಆಸ್ತಿ ಮತ್ತು ಮೂಲಭೂತ ಹಕ್ಕಾಗಿತ್ತು.1972 ರಿಂದ ಜಾರಿಗೆ ಬರುವ ನಾಗರಿಕ ಸೇವೆಗಳ (ಪಿಂಚಣಿ) ನಿಯಮವನ್ನು ತಿದ್ದುಪಡಿ ಮಾಡುವುದು ಸಮರ್ಥನೀಯವಲ್ಲ. ಕೇಂದ್ರ ಸರ್ಕಾರದಲ್ಲಿ ೮ ನೇ ವೇತನ ಆಯೋಗದಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ