ಶಿಡ್ಲಘಟ್ಟ: ಶಿಡ್ಲಘಟ್ಟದ ಗೌಡನಕೆರೆಗೆ ಮಣ್ಣು ಮಸಿ ಕಡ್ಡಿ ಕಸ ತುಂಬಿಸುತ್ತಿರುವುದಕ್ಕೆ ರೈತರ ವಿರೋಧ
ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಂತೆ ಇರುವ ಗೌಡನಕೆರೆಗೆ ಕಸ ಕಡ್ಡಿ ಕಟ್ಟಡಗಳ ಅವಶೇಷಗಳ ತ್ಯಾಜ್ಯವನ್ನು ತುಂಬಿಸುತ್ತಿದ್ದು ಕೂಡಲೆ ಇಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು, ಮತ್ತೆ ಯಾರು ಕೂಡ ಕೆರೆಗೆ ಕಸ ಕಡ್ಡಿ ಸುರಿಯದಂತೆ ಶಾಶ್ವತ ವ್ಯವಸ್ಥೆ ರೂಪಿಸಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.