ಮಾಲೂರು: ಮಾಲೂರು ಸುತ್ತಮುತ್ತ ಗ್ರಾಮಗಳಲ್ಲಿ ಹಗಲಿನ ಸಮಯದಲ್ಲಿ ನೀಡುತ್ತಿರುವ ೩ಫೇಸ್ ವಿದ್ಯುತ್ನ್ನು ಬೆಳಿಗ್ಗೆ 6ರಿಂದ 9 ಗಂಟೆಯೊಳಗೆ ನೀಡಲಾಗುವುದು
Malur, Kolar | Sep 20, 2025 ಮಾಲೂರು ತಾಲ್ಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಹಗಲಿನ ಸಮಯದಲ್ಲಿ ನೀಡುತ್ತಿರುವ ೩ಫೇಸ್ ವಿದ್ಯುತ್ನ್ನು ಬೆಳಿಗ್ಗೆ ೬.೦೦ ರಿಂದ ೯.೦೦ ಗಂಟೆಯೊಳಗೆ ಪೂರೈಸಲಾಗುವುದು ಕೋಲಾರ ಕ.ವಿ.ಪ್ರ.ನಿ.ನಿ ಬೃಹತ್ ಕಾಮಗಾರಿ ವಿಭಾಗದವರು ಸೆಪ್ಟೆಂಬರ್ ೨೦ ಮತ್ತು ೨೧ ದಿನಗಳಂದು ೨೨೦ಕೆವಿ ಹೂಡಿ-ಮಾಲೂರು-ಕೋಲಾರ ಮಾರ್ಗಗಳಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದರಿಂದ ೬೬/೧೧ಕೆವಿ ಮಾಲೂರು, ಲಕ್ಕೂರು, ಮಾಸ್ತಿ, ಟೇಕಲ್, ತೋರಲಕ್ಕಿ ಮತ್ತು ಬಂಗಾರಪೇಟೆ ವಿದ್ಯುತ್ ಉಪಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಕೃಷಿ ವಿದ್ಯುತ್ ಮಾರ್ಗಗಳಿಗೆ ಹಗಲಿನ ಸಮಯದಲ್ಲಿ ನೀಡುತ್ತಿರುವ ೩ಫೇಸ್ ವಿದ್ಯುತ್ನ್ನು ಬೆಳಿಗ್ಗೆ ೬.೦೦ ರಿಂದ ೯.೦೦ ಗಂಟೆಯೊಳಗೆ ಪೂರೈಸಲಾಗುವುದು.