ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಲೆ ಮರೆಸಿಕೊಂಡಿರೋ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಶಾಸಕ ಪ್ರದೀಪ್ ಈಶ್ವರ್ ಅವರು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಯಾರೇ ಮಹಿಳಾ ಅಧಿಕಾರಿಯನ್ನು ನಿಂದಿಸಿದ್ರೆ ತಪ್ಪೇ. ರವಿಯಣ್ಣ ಆಗಲಿ ರಾಜೀವ್ ಗೌಡ ಆಗಲಿ. ಯಾರೇ ಆದರೂ ಅದು ತಪ್ಪು, ನಾನು ಅದನ್ನ ವಿರೋಧಿಸುತ್ತೆನೆ. ಅವರ ಮೇಲೆ ನಾನ್ ಬೇಲೆಬಲ್ ಸೆಕ್ಷನ್ ಹಾಕಿದ್ದಿವಿ. ತಪ್ಪು ಕಾಂಗ್ರೆಸ್ ಸೇರಿ ಯಾರೇ ಮಾಡಿದ್ರೂ ತಪ್ಪು. ಅವರ ಮೇಲೆ ಕಾನೂನು ಕ್ರಮ ಆಗುತ್ತೆ ಎಂದರು.