ಆರ್.ಟಿ ನಗರದ ಸ್ಪರ್ಶ ಆಸ್ಪತ್ರೆಗೆ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯದ ಸಮಸ್ಯೆ ಹಿನ್ನೆಲೆ ದಾಖಲಾಗಿದ್ದು, ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಅವರ ಆರೋಗ್ಯ ವಿಚಾರಿಸಿದ್ದೇನೆ, ಸುಧಾರಿಸಿಕೊಳ್ತಾ ಇದ್ದಾರೆ. ಸುಮಾರು 15 ದಿನಗಳ ಹಿಂದೆ ಬಂದು ಭೇಟಿ ಆಗಿದ್ದೆ. ಅವ್ರ ಮತ್ತು ನಮ್ನ ಗೆಳೆತನ 1972ರಿಂದ ಶುರು ಆಗಿದ್ದು, ಅಲ್ಲಿಂದ ನಾವು ಒಬ್ರನ್ನ ಒಬ್ರು ಭೇಟಿ ಆಗ್ತಾನೆ ಇದ್ವಿ ಎಂದರು.