ಶಿವಮೊಗ್ಗ: ನಗರದ ಬಿ.ಹೆಚ್ ರಸ್ತೆಯಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಮಹಿಳೆಗೆ ಹಿಂತಿರುಗಿಸಿದ ಸಂಗಮ್ ಟೈಲರ್ ನ ಮಾಲಿಕ ಕುಮಾರ್
ಶಿವಮೊಗ್ಗ ಬಿ.ಹೆಚ್. ರಸ್ತೆಯಲ್ಲಿ ಬುದ್ಧನಗರದ ನಿವಾಸಿ ರಂಜಿತಾ ಮತ್ತು ಅವರ ತಾಯಿ ರಾಜೇಶ್ವರಿಯವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬಿ.ಹೆಚ್. ರಸ್ತೆಯಲ್ಲಿರುವ ಸಂಗಮ ಟೈಲರ್ ಅಂಗಡಿಯ ಮುಂಭಾಗ ರಾಜೇಶ್ವರಿಯವರು ಧರಿಸಿದ್ದ, 32 ಗ್ರಾಂ ತೂಕದ ಬಂಗಾರದ ಸರವನ್ನು ಬೀಳಿಸಿಕೊಂಡು ಹೋಗಿದ್ದರು. ಸಂಗಮ್ ಟೈಲರ್ ಮಾಲಿಕ ಕುಮಾರ್ ಅವರಿಗೆ ರಾಜೇಶ್ವರಿ ಯವರ ಚಿನ್ನದ ಸರ ಸಿಕ್ಕಿದ್ದು, ಅದನ್ನು ಕೋಟೆ ಪೊಲೀಸ್ ಠಾಣೆಗೆ ಭಾನುವಾರ ಆಗಮಿಸಿ ರಾಜೇಶ್ವರಿ ಅವರಿಗೆ ಹಿಂದಿರುಗಿಸಿದ್ದಾರೆ.ಕುಮಾರ್ ಅವರ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.