ಬೆಂಗಳೂರು ಉತ್ತರ: ಮೂಡ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ; ಪ್ರಕರಣಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ನಗರದಲ್ಲಿ ಆರ್.ಅಶೋಕ್
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾಯನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಮುಡಾದಲ್ಲಿ 3000 ರಿಂದ 4000 ಕೋಟಿ ಲೂಟಿ ಆಗಿದೆ. ಸಿಎಂ ಅವರ ಕುಟುಂಬ ಅಕ್ರಮ 14 ಸೈಟ್ ಗಳನ್ನು ಪಡೆದಿತ್ತು. ಈ ಕೇಸ್ ಮುಚ್ಚಿ ಹೋಗುತ್ತೇನೋ ಅಂತ ಜನಕ್ಕೆ ಅನಿಸಿತ್ತು. ಆದ್ರೆ ಈಗ ದಿನೇಶ್ ಕುಮಾರ್ ಬಂಧನ ಆಗಿದೆ. ಇದರಿಂದ ಪ್ರಕರಣಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಇನ್ನಷ್ಟು ಬ್ರೋಕರ್ ಗಳ ತನಿಖೆಯೂ ಆಗಬೇಕು. ಸಿದ್ದರಾಮಯ್ಯ ಜಾತಿ ಒಡೆಯುವುದರಲ್ಲಿ ಫೇಮಸ್, ನಮ್ಮ ಸರ್ಕಾರ ಬಂದ ನಂತರ ಸಿದ್ದರಾಮಯ್ಯಗೆ ಸನ್ಮಾನ ಮಾಡ್ತೇವೆ ಎಂದು ವ್ಯಂಗ್ಯವಾಡಿದರು.