ಡಿಸಿಎಂ ಡಿಕೆ ಶಿವಕುಮಾರ್ ಅವರು, ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಎರಡನೇ ಬೆಳೆಗೆ ನೀರು ಕೊಡೋದಕ್ಕೆ ಆಗೋದಿಲ್ಲ. ಡ್ಯಾಂ ಗೇಟ್ ರಿಪೇರಿ ಆಗೋವರೆಗೂ ನೀರು ಬಿಡಲು ಆಗಲ್ಲ. ಇರುವಂತ ನೀರನ್ನು ಯಾವ ರೀತಿಯ ಬಳಕೆ ಮಾಡಿಕೊಳ್ಳಬೇಕಂಬ ಜವಬ್ದಾರಿ ಅವರಿಗೆ ಬಿಟ್ಟಿದ್ದೇನೆ. ಡ್ಯಾಮ್ ಕಾಲುವೆಗಳ ರಿಪೇರಿ ಮಾಡುವ ಬಗ್ಗೆಯೂ ತೀರ್ಮಾನ ಮಾಡಿದ್ದೇವೆ. ಉಳಿದಿದ್ದನ್ನು ತುಂಗಭದ್ರಾ ಡ್ಯಾಮ್ ಚೇರ್ ಮ್ಯಾನ್ ಸದಸ್ಯರು ಇದ್ದಾರೆ. ಅವರ ಅಭಿಪ್ರಾಯ ಅವರು ತಿಳಿಸ್ತಾರೆ ಎಂದರು.