ಡಿ.16,ಮಂಗಳವಾರ ಬೆಳಿಗ್ಗೆ 11ಕ್ಕೆ , ಕಂಪ್ಲಿ ಪಟ್ಟಣದ ಸಬ್ ರೆಜಿಸ್ಟರ್ ಕಚೇರಿ ಎದುರು ನೋಂದಣಿ ಪತ್ರ ಬರಹಗಾರರು ಇಂದು ಧರಣಿ ನಡೆಸಿದರು. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕಚೇರಿ ಮುಂದೆ ಕೂತು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಪತ್ರ ಬರಹಗಾರರು, ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಕಲ್ಪಿಸಬೇಕು, ಸೇವಾ ಭದ್ರತೆ ಒದಗಿಸಿ ಅನಾಧಿಕೃತ ವ್ಯಕ್ತಿಗಳ ಹಸ್ತಕ್ಷೇಪವನ್ನು ತಡೆಯಬೇಕು, ಇ-ಸ್ವತ್ತು ಹಾಗೂ ಇ-ಆಸ್ತಿ ದಾಖಲೆಗಳ ಮೂಲಕ ನೋಂದಣಿಯಲ್ಲಿ ಉಂಟಾಗುತ್ತಿರುವ ತಪ್ಪುಗಳನ್ನು ತಕ್ಷಣ ಸರಿಪಡಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಲಾಗುವುದು ಎಂದ