ಕನಕಗಿರಿ: ತಾಲೂಕಾ ವಾಲ್ಮೀಕಿ ಮಹಾಸಭಾದಿಂದ ಅಕ್ರಮವಾಗಿ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ವಿತರಣೆ ವಿರೋಧಿಸಿ ಪಟ್ಟಣದಲ್ಲಿ ಪ್ರತಿಭಟನೆ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಾ ವಾಲ್ಮೀಕಿ ಮಹಾಸಭಾದಿಂದ ಅಕ್ರಮವಾಗಿ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ಪಡೆಯುತ್ತೀರುವುದನ್ನು ವಿರೋಧಿಸಿ ಪ್ರತಿಭಟನೆ ಇಂದು ನಡೆಯಿತು. ಸೆಪ್ಟೆಂಬರ್ 25 ರಂದು ಮಧ್ಯಾಹ್ನ 2-00 ಗಂಟೆಗೆ ಕನಕಗಿರಿ ಪಟ್ಟಣದ ಅಗಸಿಯಿಂದ ಮೆರವಣಿಗೆ ಹೋರಟ ಪ್ರತಿಭಟನೆ ಕಾರರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬಹಿರಂಗ ಸಭೆ ಮಾಡುವ ಮೂಲಕ ತಮಗೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ಸಾಮಾಜಿಕ ಪ್ರತಿಭಟನೆ ಯಲ್ಲಿ ಸಮಾಜದ ಮುಖಂಡರು ಯುವಕರು ಭಾಗಿಯಾಗಿದ್ದರು