ಸೌಥ್ ಇಂಡಿಯಾ ಶುಗರ್ ಮೀಲ್ಸ್ ಅಸೋಸಿಯೇಷನ್ ಅಧ್ಯಕ್ಷ ಯೋಗೇಶ್ ಪಾಟೀಲ್ ಅವರು ವಿಧಾನಸೌಧದಲ್ಲಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಭೆ ಅಗಿದೆ. ರೈತರ ಸಮಸ್ಯೆ ಮತ್ತು ಕಾರ್ಖಾನೆಯ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಸಕ್ಕರೆ ಬೆಲೆ ಎಥನಾಲ್ ಬೆಲೆ ಹೆಚ್ಚಳ ಮಾಡಿಲ್ಲ. ಹೀಗಾಗಿ FRP ದರ ವನ್ನ ಸರಿಯಾದ ಸಮಯಕ್ಕೆ ಕೊಡಲು ಆಗ್ತಿಲ್ಲ. ನಾವು ನಮ್ಮ ಬೇಡಿಕೆಯನ್ನ ಇಟ್ಟಿದ್ದೇವೆ. ರಿಕವರಿ ದರ ಬೆಳಗಾವಿಗಿಂದ ಉಳಿದ ಜಿಲ್ಲೆಯಲ್ಲಿ ಕಡಿಮೆ ಇದೆ. ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಭರವಸೆ ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ, ಆದರೆ 3200ರೂ ಮಾತ್ರ ನಾವು ಕೊಡಲು ಸಿದ್ದವಿದ್ದೇವೆ. ಬಹಳ ಕಷ್ಟದಲ್ಲಿ ನಾವು 3200ರೂ ಕೊಡ್ತಿದ್ದೇವೆ ಎಂದರು.