ಬೆಂಗಳೂರಲ್ಲಿ ಹಾಡುಹಗಲೇ ದರೋಡೆ ಹಿನ್ನೆಲೆ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಅವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸಿದರು. ಬೆಂಗಳೂರಂತ ಸುರಕ್ಷಿತ ನಗರದಲ್ಲೇ 7 ಕೋಟಿ ದರೋಡೆ ಮಾಡಿದ್ದಾರೆ, ಇದೊಂದೇ ಪ್ರಕರಣ ಅಲ್ಲ, ಬಿಜಾಪುರದಲ್ಲೂ ಎರಡು ಬ್ಯಾಂಕ್ ಗಳ ದರೋಡೆ ಆಗಿದೆ ಅಂದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಮಂತ್ರಿ ಗಳು, ಗೊತ್ತಿಲ್ಲ, ಪರಿಶೀಲನೆ ಮಾಡ್ತೀನಿ ಎಂಬ ಉತ್ತರ ಅಷ್ಟೇ. ಈ ಘಟನೆಗೆ ಇವತ್ತು ಸರಿಯಾಗಿ ಅವರು ತಮ್ಮ ಇಲಾಖೆಯಲ್ಲಿ ಕೆಲಸ ಮಾಡದಿರುವುದು ಕಾರಣ. ಶಾಸಕರೇ ಪೊಲೀಸರ ವರ್ಗಾವಣೆಯನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.