ಜಾನುವಾರುಗಳಿಗೆ ಸರ್ಕಾರದ ಕಾಲು ಬಾಯಿ ಉಚಿತ ಲಸಿಕಾ ಅಭಿಯಾನಕ್ಕೆ ಕೊಮ್ಮನಹಳ್ಳಿ ಯಲ್ಲಿ ಶಾಸಕ, ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಚಾಲನೆ ದನಕರುಗಳು ಹಾಗೂ ಜಾನುವಾರುಗಳಿಗೆ ಬರುವ ಕೆಲವು ರೋಗಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರದ ವತಿಯಿಂದ ರಾಸುಗಳಿಗೆ ಉಚಿತ ಕಾಲು ಬಾಯಿ ಲಸಿಕೆಯನ್ನು ಪ್ರತಿಯೊಬ್ಬರು ತಮ್ಮ ಜಾನುವಾರುಗಳಿಗೆ ಹಾಕಿಸಿಕೊಳ್ಳಬೇಕೆಂದು ಅದರಿಂದ ಕಾಲು ಬಾಯಿ ಜ್ವರ ಬರದಂತೆ ಜಾಗ್ರತೆ ವಹಿಸಬೇಕೆಂದು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರು ತಿಳಿಸಿದರು. ಅವರು ಟೇಕಲ್ನ ತಮ್ಮ ಸ್ವಗ್ರಾಮ ಕೊಮ್ಮನಹಳ್ಳಿಯ ಹಾಲು ಉತ್ಪಾದಕರ ಬಿಎಂಸಿ ಕೇಂದ್ರದ ಬಳಿ ಸೋಮವಾರ ಮದ್ಯನ ೨ ಗಂಟೆಯಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಹಾಗೂ ಕ