ಕೆಪಿಸಿಸಿ ಕಾರ್ಯಧ್ಯಕ್ಷ ತನ್ವೀರ್ ಸೇಠ್ ಅವರು, ವಿಧಾನಸೌಧದ ಬಳಿ ನಾಯಕತ್ವ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ ಯಾರಿಗೆ ಬಂತು ಯಾವಾಗ ಬಂತು ಯಾತಕ್ಕಾಗಿ ಅಧಿಕಾರ ಬಂತು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ಈಗ ಯಾವ ಖರ್ಚಿನೂ ಕಾಲಿ ಇಲ್ಲ. ಅನಾವಶ್ಯಕವಾಗಿ ಆಸೆ ಇಟ್ಟುಕೊಂಡು ಮಾತಾಡುವುದು ಸರಿಯಲ್ಲ. ಈಗ ಸುಮ್ಮನೆ ಮಾತನಾಡುವುದು ಸರಿಯಲ್ಲ. ಯಾವಾಗ ಏನ್ ಆಗಬೇಕೋ ಅದು ಆಗುತ್ತೆ. ಏನ್ ಆಗಬೇಕೋ ಅದು ಆಗುವಾಗ ನಾನೂ ಸಾಲಿನಲ್ಲಿ ನಿಂತಿದ್ದೇನೆ ಎಂಬುದನ್ನು ಹಿಂದೆಯೂ ಹೇಳಿದ್ದೇನೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಬೇಕು ಎಂದರು.