ಉಡುಪಿ: ಮಹಿಳಾ ದೌರ್ಜನ್ಯ ವಿರೋಧಿಸಿ ನಗರದಲ್ಲಿ ಮಹಿಳೆಯರಿಂದ ಕಾಲ್ನಡಿಗೆ ಜಾಥಾ
Udupi, Udupi | Mar 9, 2024 ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಮಹಿಳಾ ದೌರ್ಜನ್ಯ ವಿರೋಧಿಸಿ ಉಡುಪಿಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿತು. ಅಜ್ಜರಕಾಡು ಹುತಾತ್ಮ ವೇದಿಕೆ ಬಳಿ ಆರಂಭವಾದ ಕಾಲ್ನಡಿಗೆ ಜಾಥಾವು, ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ನಗರ ಠಾಣೆ ಮಿಷನ್ ಕಂಪೌಂಡ್ ಮೂಲಕ ಸಾಗಿತು. ಸುಮಾರು 2000 ಮಹಿಳೆಯರು ಹಕ್ಕೊತ್ಥಾಯ ಜಾಥಾದಲ್ಲಿ ಭಾಗವಹಿಸಿದ್ದರು.