ರಾಜ್ಯ ಆಡಳಿತದ ನಿರ್ಧಾರಕ್ಕೆ ದೆಹಲಿಗೆ ಹೋಗುವ ದುಸ್ಥಿತಿ ; ಚೇತನ್ ಅಹಿಂಸ ರಾಜ್ಯದಲ್ಲಿನ ಆಡಳಿತರೂಢ ರಾಜಕೀಯ ಪಕ್ಷಗಳು ರಾಜ್ಯದ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಕಾದರೆ ವಿಮಾನ ಏರಿ ದೆಹಲಿಗೆ ತೆರಳಬೇಕಾದ ದುಸ್ಥಿತಿಯಲ್ಲಿ ವಾಸಿಸುತ್ತಿದ್ದೇವೆ ಎಂದು ಕನ್ನಡ ಚಲನ ಚಿತ್ರದ ನಟರಾದ ಚೇತನ್ ಅಹಿಂಸಾ ಅವರು ಹೇಳಿದರು. ಕೆಜಿಎಫ್ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೧೭೪ನೇ ಸಮಾನತೆಯ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಇಲ್ಲದಂತಾಗಿದೆ, ಆದರಿಂದ ಸೈದಾಂತಿಕ ನೆಲೆಯನ್ನು ಕಟ್ಟಿಕೊಳ್ಳುವ ದೃಷ್ಟಿಯಿಂದ ರಾಜ್ಯಾದ್ಯಂತ ಚಳುವಳಿಯನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.