ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣ ಸ್ವಾಮಿ ಅವರು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಮಲ್ಲೇಶ್ವರಂ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ವೈರಾಗ್ಯದ ಮಾತುಗಳನ್ನ ಆಡಲು ಶುರು ಮಾಡಿದ್ದಾರೆ. ವಾರದ ಏಳು ದಿನವೂ ಏಳು ರೀತಿ ಮಾತುಗಳನ್ನ ಸಿದ್ದರಾಮಯ್ಯ ಅವರು ಆಡುತ್ತಾರೆ. ಅರಸು ಅವರ ಅಧಿಕಾರ ಅವಧಿಯನ್ನ ಸರಿಗಟ್ಟಿದ್ದೇನೆ ಎಂಬ ಹೇಳಿಕೆ ಇತ್ತಿಚೆಗೆ ಅವರಿಂದ ಬರುತ್ತಿದೆ. ಸಿದ್ದರಾಮಯ್ಯ ಅವರೇ ನೀವು ಅರಸು ಅವರ ಒಂದು ತೃಣಕ್ಕು ಸಮ ಇದ್ದೀರಾ ? ಅವರ ನಡೆ ಎಲ್ಲಿ ನಿಮ್ಮ ನಡೆ ಎಲ್ಲಿ ? ಅರಸು ಅವರು ಸೋಲಿಲ್ಲದ ಸರದಾರ ಎಂಬ ಹೆಸರು ಪಡೆದಿದ್ದರು. ಸಿದ್ದರಾಮಯ್ಯ ಅವರು ಸೋಲಿನ ಸರದಾರ ಎಂದು ವ್ಯಂಗ್ಯ ಮಾಡಿದರು.