ಹನೂರು ತಾಲ್ಲೂಕಿನ ಎಲ್ಲೆಮಾಳ ಗ್ರಾಮದಲ್ಲಿನ ಮಹದೇಶ್ವರ ಬೆಟ್ಟ ರಸ್ತೆ ಮೇಲೆ ಜಮೀನಿಗೆ ತೆರಳುತ್ತಿದ್ದ ರೈತನಿಗೆ ಬೈಕ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.ಎಲ್ಲೆಮಾಳ ಗ್ರಾಮದ ವೆಂಕಯ್ಯ (65) ಎಂಬುವರೇ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಅವರು ರಸ್ತೆ ಮೂಲಕ ನೆಡೆಯುತ್ತಾ ತಮ್ಮ ಜಮೀನಿಗೆ ತೆರಳುತ್ತಿದ್ದ ವೇಳೆ, ಮಹದೇಶ್ವರ ಬೆಟ್ಟದ ದಿಕ್ಕಿಗೆ ತೆರಳುತ್ತಿದ್ದ ಕೆಎ 42 ಇ ಹೆಚ್ 7781 ಸಂಖ್ಯೆಯ ಬೈಕ್ ಚಾಲಕ ನಿಯಂತ್ರಣ ತಪ್ಪಿ,ವೆಂಕಯ್ಯ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ಪರಿಣಾಮವಾಗಿ ವೆಂಕಯ್ಯ ಅವರ ಎಡ ಕಾಲು ಮುರಿದು, ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಅಪಘಾತದ ನಂತರ ಅವರು ರಸ್ತೆ ಬದಿಯಲ್ಲಿ ಬಿದ್ದಿದ್ದರು, ತಕ್ಷಣವೇ ಪೊಲೀಸರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ರವಾನಸಿದ್ದಾರೆ