ಸಕಲೇಶಪುರ: ಬೆಳಗೋಡು ಜಿ.ಪಂ ಕ್ಷೇತ್ರ ಮೀಸಲಾತಿ ಬದಲಾವಣೆಗೆ ವಿರೋಧ: ಗುಳಗಳಲೆ ಖಾಸಿಂ ಆಗ್ರಹ
ಬೆಳಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಹಿಂದುಳಿದ ವರ್ಗ 'ಎ' ಮಹಿಳೆಗೆ ಮೀಸಲಿಟ್ಟಿರುವ ನಿರ್ಧಾರವನ್ನು ಬದಲಾಯಿಸದಂತೆ ಕಾಂಗ್ರೆಸ್ ಮುಖಂಡ ಗುಳಗಳಲೆ ಖಾಸಿಂ ಒತ್ತಾಯಿಸಿದ್ದಾರೆ. ಮೀಸಲಾತಿ ಪಟ್ಟಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.