ಮಳವಳ್ಳಿ: ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಆಯೋಗದ ಅಧ್ಯಕ್ಷರ ಸುದ್ದಿಗೋಷ್ಠಿ, ಪ್ರಕರಣಗಳ ಇತ್ಯಾರ್ಥಕ್ಕೆ ಕ್ರಮ ಎಂದ ಡಾ. ಮೂರ್ತಿ
ಮಳವಳ್ಳಿ : ಪರಿಶಿಷ್ಟ ಜಾತಿ ವರ್ಗ ಹಾಗೂ ಬುಡಕಟ್ಟು ಆಯೋಗದಲ್ಲಿ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ಬಹಳ ವರ್ಷಗಳಿಂದ ಬಾಕಿ ಉಳಿದಿದ್ದು ಇವುಗಳ ಇತ್ಯಾರ್ಥಕ್ಕೆ ಕ್ರಮ ವಹಿಸಲಾಗಿದೆ ಎಂದು ಅಯೋಗದ ಅಧ್ಯಕ್ಷರಾದ ಡಾ. ಮೂರ್ತಿ ತಿಳಿಸಿದ್ದಾರೆ. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಾಯಂಕಾಲ 4 ಗಂಟೆ ಸಮಯ ದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಅವರು ಮದ್ದೂರು ತಾಲ್ಲೂಕಿಗೆ ಸಂಬಂಧಿ ಸಿದ 48, ಮಳವಳ್ಳಿ ತಾಲ್ಲೂಕಿಗೆ ಸಂಬಂಧಿಸಿದ 38 ಕೇಸುಗಳು ದಾಖಲಾಗಿದ್ದು 2014-15 ನೇ ಸಾಲಿನಿಂದಲೂ ಪ್ರಕರಣಗಳು ಬಾಕಿ ಉಳಿದಿದ್ದು ಇವುಗಳನ್ನು ಶೀಘ್ರವಾಗಿ ಇತ್ಯಾರ್ಥ ಪಡಿಸಲು ಆಯೋಗದಿಂದ 6ಬಾರಿ ಕೋಟ್೯ ಸಿಟ್ಟಿಂಗ್ ಮಾಡಿದ್ದೇನೆ ಎಂದರು.