ಜಮಖಂಡಿ: ನಮ್ಮದು ನುಡಿದಂತೆ ನಡೆದ ಸರ್ಕಾರ, ನಗರದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ
ಕಾಂಗ್ರೆಸ್ ನೇತೃತ್ವದ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಹೇಳಿದ್ದಾರೆ.ಜಮಖಂಡಿ ನಗರದಲ್ಲಿ ಮಾತನಾಡಿರುವ ಅವರು,ಚುನಾವಣೆಗೂ ಮೊದಲು ಕೃಷ್ಣಾ ಮೇಲ್ದಂಡೆ ವಿಚಾರದಲ್ಲಿ ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತುಕೊಟ್ಟಂತೆ ನಮ್ಮ ಸರ್ಕಾರ ನಡೆದಿದೆ.ಸಚಿವ ಸಂಪುಟದಲ್ಲಿ ಕೃ.ಮೇ.ಯೋ ಮೂರನೇ ಹಂತ ಪೂರ್ಣಗೊಳಿಸಲು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.ಇದು ರೈತರ ಪರವಾಗಿರುವ ಸರ್ಕಾರ ಹಾಗಾಗಿ ಸಿಎಂ ಡಿಸಿಎಂ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.