ಸಿದ್ಧಾಪುರ: ಶ್ರೀ ಮನ್ನೆಲೆಮಾವಿನ ಮಠದಲ್ಲಿ ಚಾತುರ್ಮಾಸದ ಆಚರಣೆ
ಸಿದ್ದಾಪುರ : ತಾಲೂಕಿನ ಶ್ರೀ ಮನ್ನೆಲೆಮಾವಿನ ಮಠದಲ್ಲಿ ಚಾತುರ್ಮಾಸದ ಆಚರಣೆಯು ಶ್ರದ್ಧಾ ಭಕ್ತಿಯಿಂದ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜರುಗಿತು. ಪೂಜ್ಯ ಶ್ರೀ ಮಾಧವಾನಂದ ಭಾರತೀಮಹಾಸ್ವಾಮಿಗಳು ವ್ಯಾಸ ಪೂಜೆಯೊಂದಿಗೆ ಚಾತುರ್ಮಾಸ ವೃತವನ್ನು ಸಂಕಲ್ಪಿಸಿದರು. ತದನಂತರ ಶ್ರೀ ಮಠದ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಮುರಾರ್ಜಿ ಹೊಸಮನೆ ದಂಪತಿಗಳು ಪುರೋಹಿತರಾದ ವಿನಾಯಕ ಭಟ್ ವಾಟೆಕೊಪ್ಪ ಹಾಗೂ ಆಗಮಿಸಿದ ವೈದಿಕರ ಸಹಕಾರದೊಂದಿಗೆ ಸೀಮೆಯ ಸಮಸ್ತ ಭಕ್ತರ ಪರವಾಗಿ ಗುರು ಪಾದುಕಾ ಪೂಜೆ, ಭಿಕ್ಷಾವಂದನೆ ಮತ್ತು ವಸ್ತ್ರ ಸಮರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.