ಸಿದ್ಧಾಪುರ: ಸಿದ್ದಾಪುರ ಟಿ.ಎಮ್.ಎಸ್. ಸಂಸ್ಥೆಯ ವಾರ್ಷಿಕ ಸಾಧಾರಣ ಸಭೆ : 5 ಕೋಟಿ ರೂ ಗೂ ಅಧಿಕ ಲಾಭದ ಮಾಹಿತಿ
ಸಿದ್ದಾಪುರ : ಪಟ್ಟಣದ ಟಿ ಎಮ್ ಎಸ್ ಸಂಸ್ಥೆಯ ವಾರ್ಷಿಕ ಸಾಧಾರಣ ಸಭೆಯು ಶನಿವಾರ ಸಂಸ್ಥೆಯ ಸಭಾಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್.ಎಮ್.ಹೆಗಡೆ ಬಾಳೇಸರ, ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 5 ಕೋಟಿಗೂ ಅಧಿಕ ಲಾಭ ಗಳಿಸಿದೆ. ಇದಕ್ಕೆ ಗ್ರಾಹಕರ, ಷೇರು ಸದಸ್ಯರ ಪ್ರಾಮಾಣಿಕ ವ್ಯವಹಾರ ಕಾರಣ ಎಂದರು. ಸಭೆಯಲ್ಲಿ ಸಂಸ್ಥೆಯ ಅಡಾವೆ ಪತ್ರಿಕೆ ಕುರಿತು ಷೇರು ಸದಸ್ಯರೊಂದಿಗೆ ಚರ್ಚೆ ನಡೆಯಿತು. ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು, ಷೇರು ಸದಸ್ಯರು ಉಪಸ್ಥಿತರಿದ್ದರು.