ಕಲಬುರಗಿ: ಕಲಬುರಗಿ ಮತಗಟ್ಟೆ ಸಂಖ್ಯೆ 64: ಬೆಳಿಗ್ಗೆ 10.10ರವರೆಗೆ 87 ಮತ ಚಲಾವಣೆ
ಕಲಬುರಗಿ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 64ರಲ್ಲಿ ಬೆಳಿಗ್ಗೆ 10.10 ಗಂಟೆಯವರೆಗೆ ಒಟ್ಟು 87 ಮತಗಳು ಚಲಾವಣೆಯಾಗಿವೆ. ಇಲ್ಲಿನ ಒಟ್ಟು 533 ಮತದಾರರ ಪೈಕಿ 38 ಪುರುಷರು ಮತ್ತು 49 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.