ಬೆಂಗಳೂರು ಉತ್ತರ: ಸಂಪುಟ ಬದಲಾವಣೆ ಚರ್ಚೆ ಸದ್ಯಕ್ಕಿಲ್ಲ: ನಗರದಲ್ಲಿ ಅಪ್ಪಾಜಿ ನಾಡಗೌಡ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಶಾಸಕ ಅಪ್ಪಾಜಿ ನಾಡಗೌಡ ಅವರು ಸದಾಶಿವನಗರದಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಇದೇ ಮೊದಲ ಬಾರಿ ಬಂದಿಲ್ಲ. ನಮ್ಮದು 40 ವರ್ಷಗಳ ರಾಜಕೀಯ ಸಂಬಂದ. ಖರ್ಗೆಯವರು ನಮ್ಮ ಪಕ್ಷದ ಹಿರಿಯ ನಾಯಕರು. ನಾನು ಹಿಂದಿನಿಂದಲೂ ಭೇಟಿಮಾಡ್ತಿದ್ದೇನೆ. ಆದರೆ ಈಗ ಅವರು ಪಕ್ಷದ ಅಧ್ಯಕ್ಷರು. ಹಾಗಾಗಿ ನೀವೆಲ್ಲ ಈಗ ಕೇಳ್ತಿದ್ದೀರ. ನಿನ್ನೆಯೂ ಬಂದಿದ್ದೆ ಸಿಕ್ಕಿರಲಿಲ್ಲ. ಇದೀಗ ಅವರ ಭೇಟಿಗೆ ಬಂದಿದ್ದೇನೆ. ಈಗ ಸಂಪುಟ ಬದಲಾವಣೆ ಚರ್ಚೆ ಸದ್ಯಕ್ಕಿಲ್ಲ. ಬಿಹಾರ ಚುನಾವಣೆ ಎಲ್ಲ ಮುಗಿಯಬೇಕು. ಆಮೇಲೆ ಇದರ ಚರ್ಚೆ ಶುರುವಾಗಬಹುದು ಎಂದರು.