ಶ್ರೀನಿವಾಸಪುರ: ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ
ಶಾಲೆಯ ಬಳಿ ಬಾರ್:ನಗರದಲ್ಲಿ ಸ್ಥಳೀಯರ ಆಕ್ರೋಷ
ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಸರ್ಕಾರಿ ಮಾದರಿ ಉನ್ನತಿಕೃತ ಶಾಲೆ ಊಹಿಸಲಾಗದಂತೆ ಬೆಳೆದು ಬಡ ವಿದ್ಯಾರ್ಥಿಗಳ ಜೀವನಕ್ಕೆ ದಾರಿಯಾಗುತ್ತಿದೆ. ಇಲ್ಲಿನ ಮುಖ್ಯ ಶಿಕ್ಷಕರ, ಸಹ ಶಿಕ್ಷಕರ ಹಾಗೂ ದಾನಿಗಳ ಸಹಕಾರದಿಂದ ಖಾಸಗಿ ಶಾಲೆಗೂ ಕಮ್ಮಿಯಾಗದಂತೆ ನಡೆದುಕೊಳ್ಳುತ್ತಿದೆ. ಆದ್ರೆ ಈ ಶಾಲೆಗೆ ವಿದ್ಯಾರ್ಥಿಗಳು ಹೋಗಿ ಬರುವ ದಾರಿಯಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ರಾಜಕೀಯ ಪ್ರಾಬಾಲ್ಯದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಟ್ಟಡದಲ್ಲಿ ಒಂದು ಅಂಗಡಿ ಮಳಿಗೆಯನ್ನು ಬಾಡಿಗೆಗೆ ಪಡೆದು ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ. ಸರ್ಕಾರ ಶಾಲಾ ಆವರಣದ ನೂರು ಮೀಟರ್ ಸುತ್ತಾ ಧೂಮಪಾನ ಮಡುತ್ತಿದ್ದಾರೆ ಎಂದು ಬುಧವಾರ ಆಕ್ರೋಷ ಹೊರಹಾಕಿದ್ರು