ಬೆಂಗಳೂರು ದಕ್ಷಿಣ: ಕುತ್ತಿಗೆ ಹಿಸುಕಿ ನಾಯಿಯನ್ನು ಕೊಲೆ ಮಾಡುವ ದ್ವೇಷ ಈ ಪಾಪಿಗೆ ಏನಿತ್ತು? JP ನಗರದಲ್ಲಿ ನಡೆದ ವಿಚಿತ್ರ ಘಟನೆ CCTV ಬಿಚ್ಚಿಟ್ಟ ಸಾಕ್ಷ್ಯ!
jp ನಗರದಲ್ಲಿ ನಾಯಿಯನ್ನು ಕ್ರೂರವಾಗಿ ಕಂಪೌಂಡ್ ಎಸೆದ ಪ್ರಕರಣ ಸಂಬಂಧ ಇನ್ನೊಂದು ವಿಡಿಯೋ ಲಭ್ಯ ಆಗಿದೆ. CCTV ದೃಶ್ಯದಲ್ಲಿ ಕಿರಾತಕ ನಾಯಿ ಕೊಲೆ ಮಾಡಿದ ಆರೋಪ ಹೊತ್ತಿರುವವ ನೇಪಾಳಿ ಮೂಲದ ಹುಡುಗ ನಾಯಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಾಯಿ ಕಂಪೌಂಡ್ ಎಸೆದಾಗ ಸತ್ತಿಲ್ಲ ಅನ್ನೋದು ಗೊತ್ತಾಗ್ತಾ ಇದ್ದ ಹಾಗೇ ಮೊಬೈಲ್ ಟಾರ್ಚ್ ಅಲ್ಲಿ ಹಿಡಿದು ನಾಯಿ ಮರಿಯ ಕುತ್ತಿಗೆ ಹಿಡಿದು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆಯ CCTV ದೃಶ್ಯ ಜನವರಿ 13 ರಂದು ಲಭ್ಯ ಆಗಿದೆ.