ಬೆಂಗಳೂರು ಉತ್ತರ: ಗಾಯಕ ಸೋನು ನಿಗಮ್ಗೆ ಕಾನೂನು ಕಂಟಕ, ಮುಂದಿನ ವಾರ ವಿಚಾರಣೆಗೆ ಹಾಜರಾಗಲು ಸೂಚನೆ
ಕನ್ನಡದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ದ ಈಗಾಗಲೇ ಕನ್ನಪಡರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇತ್ತ ಆವಲಹಳ್ಳಿ ಪೊಲಿಸ್ರು ತನಿಖೆ ಶುರು ಮಾಡಿದ್ದು ಮುಂದಿನವಾರ ವಿಚಾರಣೆಗೆ ಹಾಜರಾಗಲು ವ್ಯಾಟ್ಸಪ್ ಮೂಲಕ ನೊಟೀಸ್ ನೀಡಿದ್ದಾರೆ. ಸೋನು ನಿಗಮ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ವಸಂತನಗರದ ತಮ್ಮ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್.ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.