ಹುಬ್ಬಳ್ಳಿ ನಗರ: ನಗರದ ಕೇಶ್ವಾಪುರ ವ್ಯಾಪ್ತಿಯಲ್ಲಿ ಮಾಸ್ಕ್‌ಧಾರಿಗಳ ತಂಡದಿಂದ ದರೋಡೆಗೆ ಯತ್ನ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹುಬ್ಬಳ್ಳಿ: ನಗರದ ಕೇಶ್ವಾಪುರದ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸಿದ್ದ ತಂಡವೊಂದು ದರೋಡೆಗೆ ಯತ್ನಿಸಿದ್ದ ಘಟನೆ ನಡೆದಿದ್ದು, ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಜರೋಷವಾಗಿ ಮನೆಯ ಗೇಟ್ ನ್ನು ಮುರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಒಂದೇ ದಿನ ಎರಡು ಮನೆಗಳ ದರೋಡೆಗೆ ಯತ್ನಿಸಿದ್ದು ಕೈಯಲ ಬಡಿಗೆ, ಕೋಲು, ರಾಡ್ ಹಿಡಿದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ದಾಳಿಯತ್ನಿಸಿರುವ ದೃಶ್ಯ ಕಂಡು ಬಂದಿದೆ. ಇದೇ ವೇಳೆ ಪೊಲೀಸರು ಬೀಟ್ ಗೆ ಬರುತ್ತಿದ್ದಂತೆ ದರೋಡೆಕೋರರು ಪರಾರಿಯಾಗಿದ್ದಾರೆ. ದರೋಡೆಕೋರರ ಹಾವಳಿಯಿಂದ ಜನತೆ ಆತಂಕಕ್ಕೆಈಡಾಗುವಂತಾಗಿದೆ.