ಬೆಂಗಳೂರು ಉತ್ತರ: ಕಾಂಗ್ರೆಸ್ ಸರ್ಕಾರ ಯುವಕರಿಗೆ ಶಾಪವಾಗಿ ಬದಲಾಗಿದೆ: ನಗರದಲ್ಲಿ ಸದಾನಂದಗೌಡ
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಡಳಿತದ ಚುಕ್ಕಾಣಿ ಹಿಡಿದಂದಿನಿಂದ ಅವರ ಗಮನ ಅಭಿವೃದ್ಧಿಯತ್ತ ಹೋಗಿಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಮಲ್ಲೇಶ್ವರಂ ನಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಿದರು, ಯುವ ಜನರಿಗೆ ಪ್ರಥಮ ಆದ್ಯತೆ ಕೊಡಬೇಕು, ಹೂಡಿಕೆ ಬರಲು ಮೂಲಭೂತ ಸೌಕರ್ಯ ಬೇಕು. ರಿಕ್ಷಾಗಳನ್ನು ಮುಚ್ಚುವಷ್ಟು ರಸ್ತೆ ಗುಂಡಿಗಳು ಬೆಂಗಳೂರಿನಲ್ಲಿವೆ. ಅಧಿಕಾರಕ್ಕೆ ಬಂದವರು ಜನರ ಆಶೋತ್ತರ ಕಡೆಗಣಿಸುವ ಉದ್ದೇಶ ಪೂರ್ತಿಯಾಗಿದೆ. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕೊಡುವ ಸೌಲಭ್ಯಗಳನ್ನು ನೋಡಿದಾಗ ಈ ಸರ್ಕಾರ ಯುವಕರಿಗೆ ಶಾಪವಾಗಿದೆ ಎಂದರು.