ಕಲಬುರಗಿ: ಗಂಡ- ಹೆಂಡತಿ ಜಗಳಕ್ಕೆ ಬುದ್ದಿವಾದ ಹೇಳಿದಕ್ಕೆ ಹಗೆತನ ಆರೋಪ; ನಗರದಲ್ಲಿ ನಾಲ್ವರ ಮೇಲೆ ಮಾರಕಾಸ್ತ್ರದಿಂದ ದಾಳಿ
ನಗರದ ಆರ್.ಜಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿರುವ ಆರೋಪ ಕೇಳಿಬಂದಿದೆ. ಅಮಿನಸಾಬ, ಅವರ ತಮ್ಮ ಸುಭಾನ, ತಂಗಿ ಸಾನಿಯಾ ಹಾಗೂ ತಾಯಿ ಶಾಹಾಜಾಬೀ ಗಾಯಗೊಂಡಿದ್ದಾರೆ. ದೂರುದಾರ ಅಮಿನಸಾಬ ನೀಡಿರುವ ಹೇಳಿಕೆಯ ಪ್ರಕಾರ, ಎರಡು ತಿಂಗಳ ಹಿಂದೆ ಅವರ ಚಿಕ್ಕಮ್ಮ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡಾಗ, ಕುಟುಂಬಸ್ಥರು ಹೋಗಿ ಬುದ್ದಿವಾದ ಹೇಳಿದ ಕಾರಣಕ್ಕೆ ಮೈಮೂದ ಯಲಗಾರ ಮತ್ತು ಅವರ ಪರಿವಾರದವರು ಹಗೆತನ ಬೆಳೆಸಿಕೊಂಡಿದ್ದರು. ಈ ಹಳೆಯ ವೈಷಮ್ಯದಿಂದ, ಈಗ ಮೈಮೂದ ಯಲಗಾರ, ಜೀಲಾನ, ಮತೀನ, ಮನಸೂರ ಹಾಗೂ ಸಾಹೀಲ್ ಸೇರಿ ಕೊಯ್ತಾ, ಮಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ಮನೆಗೆ