ಕಲಬುರಗಿ: ಕಲಬುರಗಿಯಲ್ಲಿ ವೈಭವದ ಮಹಾಕಾಳಿ ಪೂಜಾ ಮೆರವಣಿಗೆ: ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ
ಕಲಬುರಗಿಯ ಕರ್ಣೇಶ್ವರ ನಗರದ ಬೃಂದಾವನ ಕಾಲೋನಿಯಲ್ಲಿ ಜೈ ಭವಾನಿ ದಸರಾ ಹಬ್ಬದ ಅಂಗವಾಗಿ ಮಹಾಕಾಳಿ ಪೂಜೆ ಜರುಗಿತು. ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮಹಾಲಕ್ಷ್ಮಿ ದೇವಸ್ಥಾನದಿಂದ ರಾಜಮೋಹನ್ ಲೇಔಟ್ವರೆಗೆ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.