ಬೆಂಗಳೂರು ಉತ್ತರ: ಯಲಹಂಕದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡ ಗ್ರಾಮ ಪಂಚಾಯ್ತಿ ಮುಖಂಡರು
ಕಾಂಗ್ರೆಸ್ ಪಕ್ಷವನ್ನ ತ್ಯಜಿಸಿ ಭಾನುವಾರ ಯಲಹಂಕ ಕ್ಷೇತ್ರದ ಗ್ರಾಮ ಪಂಚಾಯ್ತಿಗಳ ಹಲವು ಮುಖಂಡರು ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಪಕ್ಷ ಸೇರ್ಪಡೆ ನಂತರ ಮಾತನಾಡಿದ ಎಸ್.ಆರ್ ವಿಶ್ವನಾಥ್ ಅವರು, ನರೇಂದ್ರ ಮೋದಿ ರವರ ಸರ್ಕಾರದ ಸಾಧನೆಗಳು ಅಭಿವೃದ್ಧಿ ಕಾರ್ಯಗಳು. ಯಲಹಂಕ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಸೋಣ್ಣೀನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಚೆನ್ನಸಂದ್ರದ ಮೋಹನ್ ಮತ್ತು ವಿಜಯ್ , ಅಂಚೆಪಾಳ್ಯದ ಅನಿಲ್ , ಬ್ಯಾತ ಗ್ರಾಮದ ಮಂಜುನಾಥ್, ಸೇರಿದಂತೆ ಹಲವರು ಇಂದು ಪಕ್ಷ ಸೇರ್ಪಡೆಗೊಂಡಿದ್ದಾರೆ ಎಂದರು.