ದೊಡ್ಡಬಳ್ಳಾಪುರ: ಹೊಸಹುಡ್ಯ ಗ್ರಾಮದಲ್ಲಿ ಮನೆಗಳ್ಳತನ ಹಣ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು
ಮನೆ ಬಾಗಿಲು ಒಡೆದು ನಗ, ನಗದು ದೋಚಿದ ಕಳ್ಳರು ಖತರ್ನಾಕ್ ಕಳ್ಳರು ಮನೆಯ ಬಾಗಿಲು ಒಡೆದು ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕದ್ದು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹುಡ್ಯ ಗ್ರಾಮದಲ್ಲಿರುವ ಸೋಮಣ್ಣ ಎನ್ನುವವರ ಮನೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ನಿನ್ನೆ ಸೋಮಣ್ಣ ಅವರ ಕುಟುಂಬ ಮೊಮ್ಮಗನ ಜನ್ಮದಿನದ ಕಾರಣ ಸುರದೇನಪುರಕ್ಕೆ ತೆರಳಿದ್ದರಂತೆ ಇದನ್ನೆ ಹೊಂಚು ಹಾಕಿರುವ ದುಷ್ಕರ್ಮಿಗಳು, ಮನೆ ಬಾಗಿಲು, ಬೀಗವನ್ನು ಆರೆಕೋಲು ಬಳಸಿ ಮೀಟಿ ಮನೆಗೆ ನುಗ್ಗಿ, ಸುಮಾರು 250 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ,ಎಟಿಎಂ ಕಾರ್ಡ್ ಗಳು, 50 ಸಾವಿರ ನಗದು ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ ಎನ್ನ