ಕೋಲಾರ: ಧರ್ಮಸ್ಥಳ ಸೌಜನ್ಯ ಹತ್ಯೆ ಪ್ರಕರಣ:ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
Kolar, Kolar | Oct 9, 2025 ಧರ್ಮಸ್ಥಳ ಸೌಜನ್ಯ ಹತ್ಯೆ ಪ್ರಕರಣಕ್ಕೆ 13 ವರ್ಷಗಳು ಹಿನ್ನಲೆ,ತನಿಖೆ ನಡೆಯಲಿ ,ತಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಘೋಷಣೆ ಕೂಗುತ್ತಾ,ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿದ್ರು. ದಲಿತಪರ ಸಂಘಟನೆ ಕಾರ್ಯಕರ್ತರು , ವಿದ್ಯಾರ್ಥಿನಿಯರು ಎಸ್ ಎಫ್ ಐ ಸಂಘಟನೆಗಳು ಭಾಗಿಯಾಗಿ ಗುರುವಾರ ನಗರದ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಚಿಕೇತನ ನಿಲಯದಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ಸಾಗಿ ಸೌಜನ್ಯಳನ್ನುಕೊಂದವರ‌್ಯಾರು ಕೊಂದವರ‌್ಯಾರು ಹುಡುಕಬೇಕು,ಅಫರಾಧಿಗಳಿಗೆ ಶಿಕ್ಷೆಯಾಗಲೆಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ರು.