ಸಾಗರ: ಪೌರ ನೀರು ಸರಬರಾಜು ನೌಕರರ ಬೇಡಿಕೆ ಈಡೇರಿಸಬೇಕು: ಸಾಗರದಲ್ಲಿ ಅಧ್ಯಕ್ಷ ಗಣೇಶ್ ಪ್ರಸಾದ್
Sagar, Shimoga | Oct 7, 2025 ಸಾಗರ ನಗರಸಭೆ ಸೇರಿ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿಸೇವೆ ಸಲ್ಲಿಸುತ್ತಿರುವ ಪೌರ ನೀರು ಸರಬರಾಜು ನೌಕರರನ್ನು ಖಾಯಂ ಗೊಳಿಸಬೇಕು. ಇಲ್ಲವೇ ನೇರ ಪಾವತಿ ವ್ಯಾಪ್ತಿಗೆ ತರಬೇಕೆಂದು ಸೇವೆ ಸ್ಥಗಿತಗೊಳಿಸಿ ಅ.6ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ ಕಳೆದ ಮೂರು ದಿನಗಳಿಂದ ಸಾರ್ವಜನಿಕರು ಪರದಾಡುತ್ತಿರುವ ಹಿನ್ನೆಲೆ ನಗರಸಭೆಯ ಆಡಳಿತ ಪಕ್ಷದ ಸದಸ್ಯ ಹಾಗೂ ನಗರ ಬಿಜೆಪಿ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಮಾತನಾಡಿ, ಪೌರ ನೀರು ಸರಬರಾಜು ನೌಕರರ ಬೇಡಿಕೆ ನ್ಯಾಯಯುತ ಬೇಡಿಕೆ ಸರ್ಕಾರ ತಕ್ಷಣ ನೌಕರರ ಮೂಲಕ ಮುಷ್ಕರಕ್ಕೆ ತೆರೆ ನೀಡಬೇಕು ಎಂದು ಮಂಗಳವಾರ ಹೇಳಿದರು.