ಕೋಲಾರ: ಕರ್ನಾಟಕ ರಿಪಬ್ಲಿಕನ್ ಸಂಘಟನೆ ನೇತೃತ್ವದಲ್ಲಿ ಪಶು ವೈದ್ಯಧಿಕಾರಿಗಳ ಅಕ್ರಮವನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ
Kolar, Kolar | Oct 9, 2025 ಉಪ ನಿರ್ದೇಶಕರು,ಪಶು ವೈದ್ಯ ಇಲಾಖೆ,ಕೋಲಾರ ಜಿಲ್ಲೆಯ ಕಚೇರಿಯ ಮುಂಭಾಗ ಕೆ ಆರ್ ಎಸ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮತ್ತು ಮಹಿಳಾ ರಾಜ್ಯ ಅಧ್ಯಕ್ಷರಾದ ಉಮಾದೇವಿ ನೇತೃತ್ವದಲ್ಲಿ ಸಾಮೂಹಿಕ ಪ್ರತಿಭಟನೆ ಗುರುವಾರ ನಡೆಸಿ ಮಾತನಾಡಿದರು ಜಿಲ್ಲಾಧ್ಯಂತ ಪಶು ವೈದ್ಯ ಇಲಾಖೆಯ ಭ್ರಷ್ಟಾಚಾರ ನಡೆದಿದ್ದು ಅತಿ ಹೆಚ್ಚಾಗಿ ಮುಳಬಾಗಿಲು ತಾಲ್ಲೂಕಿನ ಪಶುವೈದ್ಯ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕಿಯಾದ ಅನುರಾಧ ಎಂಬುವವರು ಮಾಡಿರತಕ್ಕಂತ ಕೋಟ್ಯಾಂತರ ರುಪಾಯಿಗಳ ಹಗರಣಗಳನ್ನು ನಾವು ಮಾನ್ಯ ಗೌರವಾನ್ವಿತ ಲೋಕಾಯುಕ್ತರ ತನಿಖೆಗೆ ಒಪ್ಪಿಸಲು ಒತ್ತಾಯ ಎಂದರು.