ಚಿಕ್ಕಮಗಳೂರು: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅಡ್ಡ ಬಂದ ಕಾಂಕ್ರಿಟ್ ಮಿಕ್ಸರ್, ಪೊಲೀಸರಿಂದ ಫುಲ್ ಕ್ಲಾಸ್.! ಮೊಸಳೆಹೊಸಳ್ಳಿ ಘಟನೆ ಬಳಿಕ ಎಚ್ಚೆತ್ತ ಖಾಕಿ.!
ಗಣಪತಿ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ದೊಡ್ಡದಾದ ಕಾಂಕ್ರೀಟ್ ಮಿಕ್ಸರ್ ಲಾರಿ ಎಂದು ಅಡ್ಡ ಬಂದಿದ್ದು ಪೊಲೀಸರು ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಉಪ್ಪಳ್ಳಿಯಲ್ಲಿ ನಡೆದಿದೆ. ಹಾಸನದ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದ ಕ್ಯಾಂಟರ್ ದುರಂತದ ಬಳಿಕ ಎಚ್ಚೆತ್ತ ಪೊಲೀಸರು ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆಯುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ಅಡ್ಡ ಬಂದ ಕಾಂಕ್ರೀಟ್ ಮಿಕ್ಸರ್ ಚಾಲಕನಿಗೆ ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.