ಹನೂರು: ಹನೂರಿನಲ್ಲಿ ವನಮಹೋತ್ಸವ: ವನ್ಯಜೀವಿ–ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಶಾಸಕ ಮಂಜುನಾಥ್
ಹನೂರು: ವನ್ಯಜೀವಿ ಸಂರಕ್ಷಣಾಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಜಾಗೃತಿ ಹೊಂದಿ ಕಾರ್ಯನಿರ್ವಹಿಸುವುದು ಅತ್ಯಗತ್ಯ” ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ಹನೂರು ಪಟ್ಟಣದ ಆರ್.ಎಸ್. ದೊಡ್ಡಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಶಾಲೆಯ ಸಹಯೋಗದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಪ್ರಕೃತಿಯ ಮಹತ್ವವನ್ನು ಸ್ಮರಿಸಿದರು.