ಬೆಂಗಳೂರು ಉತ್ತರ: ಇಂಡಿಯಾ - ಪಾಕಿಸ್ತಾನ ಮ್ಯಾಚ್; ಆಡಿಸೋದು ಬಿಡೋದು ಅವರಿಗೆ ಬಿಟ್ಟ ವಿಚಾರ: ನಗರದಲ್ಲಿ ಚೆಲುವರಾಯಸ್ವಾಮಿ
ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಅವರು, ಇಡೀ ಭಾರತದ ಜನರು ತಿರಸ್ಕರಿಸಿದ್ದಾರೆ. ನಾವು ಮ್ಯಾಚ್ ನೋಡಲ್ಲ ಅಂತ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ ತೀರ್ಮಾನ ಮಾಡೋದು ಯಾರು? ಅದರ ಬೋರ್ಡ್ ಅಧ್ಯಕ್ಷರ ಅಮಿತ್ ಶಾ ಪುತ್ರ ಇದ್ದಾರೆ. ಬಾಯಲ್ಲಿ ಮಾತ್ರ ಪಾಕಿಸ್ತಾನ ಅಂತಾರೆ, ಅವರ ಜೊತೆಗೆ ಮ್ಯಾಚ್ ಆಡಿಸ್ತಿದ್ದಾರೆ. ಮಧ್ಯಾಹ್ನ ಸಭೆ ಮಾಡ್ತಿವಿ ಎಂದರು, ಆದರೂ ಮ್ಯಾಚ್ ಆಡಿಸೋದು ಅವರಿಗೆ ಬಿಟ್ಟ ವಿಚಾರ ಎಂದರು.