ಅಂಕೋಲ: ಕಮ್ಮಾಣಿಯಿಂದ ಬರಿಗಾಲಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸಿದ್ದಿ ಯುವಕರು
ಅಂಕೋಲಾ: ತಾಲೂಕಿನ ಕಮ್ಮಾಣಿಯ ನಾಗೇಶ ಸಿದ್ದಿ ಹಾಗು ಆತನ ಸ್ನೇಹಿತ ಚರಣ ಸಿದ್ದಿ ನಾಡಿನ ಒಳಿತಿಗಾಗಿ ಹಾಗು ಅವರ ಹರಕೆಯಂತೆ ಕಮ್ಮಾಣಿಯಿಂದ ಧರ್ಮಸ್ಥಳಕ್ಕೆ ಬರಿಗಾಲಲ್ಲಿ ಕಾಲ್ನಡಿಗೆಯ ಮೂಲಕ ತೆರಳಿದ್ದಾರೆ. ತಮ್ಮ ಮನೆಯಿಂದ ಸುಮಾರು 350 ಕಿ.ಮೀ ಕ್ಕೂ ಹೆಚ್ಚು ದೂರವಿರುವ ಧರ್ಮಸ್ಥಳ ಯಾತ್ರೆ ಹೊರಟವರಿಗೆ ಶನಿವಾರ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ರಾಮನಗುಳಿಯಲ್ಲಿ ಬಿಜೆಪಿ ಕಾರ್ಯಕರ್ತರು, ಊರ ನಾಗರಿಕರು ಶುಭ ಹಾರೈಸಿ ಕಳುಹಿಸಿದ್ದಾರೆ.